ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಸುದ್ದಿ ಜಾಲ
Share
ಕಿರುತೆರೆಯಲ್ಲಿ ಯಕ್ಷ ರಾಮಾಯಣ

ಲೇಖಕರು :
ಸತೀಶ್ ನಾಯಕ್ , ಪಕಳಕು೦ಜ
ಶುಕ್ರವಾರ, ಒಕ್ಟೋಬರ್ 25 , 2013
ಸಂಪೂರ್ಣ ರಾಮಾಯಣವನ್ನು ಕಿರು ತೆರೆಯಲ್ಲಿ ಬಿತ್ತರಿಸುವ ನಿಟ್ಟಿನಲ್ಲಿ ಉಡುಪಿಯ ಒಳಕಾಡು ಮಾರುತಿ ಲೇನ್‌ನ ಪದ್ಮಾವತಿ ಕಲ್ಯಾಣ ಮಂಟಪದಲ್ಲಿ ಕಳೆದ ಎಂಟು ದಿನಗಳಿಂದ ಯಕ್ಷಗಾನ ಪ್ರದರ್ಶನದ ಚಿತ್ರೀಕರಣ ನಡೆಯುತ್ತಿದೆ.

ಪೆರಂಪಳ್ಳಿಯ ಯಕ್ಷ ಸಂಗೀತ ನಾದ ವೈಭವಂ ವತಿಯಿಂದ 200ರಿಂದ 250 ಕಂತಿನ ಯಕ್ಷಗಾನದ ಚಿತ್ರೀಕರಣ ನಡೆಯಲಿದ್ದು ಈಗಾಗಲೇ 30ರಿಂದ 40 ಕಂತಿನ ಚಿತ್ರೀಕರಣ ನಡೆದಿದೆ. ಇನ್ನೆರಡು ದಿನದ ಚಿತ್ರೀಕರಣ ಬಾಕಿಯಿದೆ.

ದೂರದರ್ಶನದ ಚಂದನದಲ್ಲಿ ಎಂ.ಎಸ್. ಕಾರಂತ ನಿರ್ಮಿಸಿದ ದಶಾವತಾರ ಯಕ್ಷಗಾನ 50 ಕಂತು ಪ್ರಸಾರವಾಗಿತ್ತು. ದಶಾವತಾರ ನಿರ್ದೇಶನದ ಹೊಣೆ ಹೊತ್ತಿದ್ದ ವಿಷ್ಣುಮೂರ್ತಿ ಶಬರಾಯರು, ಕಾರಂತರ ನಿಧನದ ಬಳಿಕ 10 ಕಂತು ಪೂರ್ಣಗೊಳಿಸಿ ಕಾರಂತರ ಕನಸು ನನಸು ಮಾಡಿದ್ದರು. ಪ್ರಸ್ತುತ ಸಂಪೂರ್ಣ ರಾಮಾಯಣ ಯಕ್ಷಗಾನ ಪ್ರದರ್ಶನವನ್ನು ನಾರಾಯಣ ಶಬರಾಯ ನಿರ್ದೇಶಿಸುತ್ತಿದ್ದು, ಚಿತ್ರೀಕರಣದ ಮೇಲುಸ್ತುವಾರಿಯನ್ನು ವಿಷ್ಣುಮೂರ್ತಿ ಶಬರಾಯ ವಹಿಸಿದ್ದಾರೆ. ಬೆಂಗಳೂರಿನ ಲಕ್ಷ್ಮಣ ಕ್ಯಾಮೆರಾಮ್ಯಾನ್. ತೆಂಕು ಮತ್ತು ಬಡಗಿನ ಹವ್ಯಾಸಿ ಹಾಗೂ ವೃತ್ತಿ ಮೇಳದ 200ಕ್ಕೂ ಅಧಿಕ ಕಲಾವಿದರು ವೇಷ ಹಾಕಿದ್ದಾರೆ, ಹೊಸ ಕಲಾವಿದರಿಗೆ ಹೆಚ್ಚಿನ ಅವಕಾಶ ದೊರೆತಿದೆ. ಬೆಳಗ್ಗೆ 9ರಿಂದ ರಾತ್ರಿ 10ರ ತನಕ ಚಿತ್ರೀಕರಣ ನಡೆಯುತ್ತಿದೆ.

ನಾರಾಯಣ ಶಬರಾಯ, ಸಂಪೂರ್ಣ ರಾಮಾಯಣ ಯಕ್ಷಗಾನ ನಿರ್ದೇಶಕ
ಚಿತ್ರೀಕರಣದ ಮೇಲುಸ್ತುವಾರಿ ವಿಷ್ಣುಮೂರ್ತಿ ಶಬರಾಯರ ಪ್ರಕಾರ, ಸಂಪೂರ್ಣ ರಾಮಾಯಣ ಯಕ್ಷಗಾನ ಟಿವಿ ಸೀರಿಯಲ್ ಈ ತನಕ ಬಂದಿಲ್ಲ. ಎಲ್ಲ ಅರ್ಧಂಬರ್ಧ ಪ್ರಸಾರವಾಗಿದೆ. ಸಂಪೂರ್ಣ ರಾಮಾಯಣದಲ್ಲಿ ಬರುವ ವೇಷಗಳ ಹಿಂದಿನ ಸಂದೇಶವನ್ನೂ ಪ್ರೇಕ್ಷಕರಿಗೆ ನೀಡಲಾಗುವುದು.

ಕಲಾವಿದರೆಲ್ಲರೂ ಮೇಳ, ಯಕ್ಷ ರಂಗದ ವ್ಯವಸ್ಥೆ ಮರೆತು ಸಹಕರಿಸುತ್ತಿದ್ದಾರೆ. ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಕರಾವಳಿಗೆ ಸೀಮಿತವಾಗಿದ್ದ ಯಕ್ಷಗಾನ ಇಂದು, ರಾಜ್ಯ, ದೇಶ, ವಿದೇಶದಲ್ಲೂ ಪ್ರಖ್ಯಾತಿ ಪಡೆದಿದೆ. ಹೊಸ ಹೊಸ ನೋಡುಗರು, ಕೇಳುಗರನ್ನು ಸೃಷ್ಟಿಸುತ್ತಿದೆ. ಆರು ತಿಂಗಳ ಬಳಿಕ ಮತ್ತೆ ಮುಂದಿನ ಕಂತಿನ ಚಿತ್ರೀಕರಣ ನಡೆಸಲಾಗುವುದು.

ಸಂಪೂರ್ಣ ರಾಮಾಯಣ ಸೀರಿಯಲ್ ಬರಬೇಕೆನ್ನುವ ನೆಲೆಯಲ್ಲಿ 25 ಲಕ್ಷ ರೂ. ವೆಚ್ಚದ ಯೋಜನೆಯಿದು. ಪ್ರೇಕ್ಷಕರ ಪ್ರೋತ್ಸಾಹಕ್ಕೆ ಕೊರತೆಯಿಲ್ಲ. ಬಣ್ಣದ ವೇಷ ಸಹಿತ ಕುಣಿತ, ಅಭಿನಯ ಎಲ್ಲವೂ ಸಮಗ್ರವಾಗಬೇಕು. 20 ಪ್ರಸಂಗದ ಚಿತ್ರೀಕರಣವಾಗಿದೆ, ಇನ್ನೂ 40ರಿಂದ 50 ಪ್ರಸಂಗ ಬಾಕಿಯಿದೆ. - ನಾರಾಯಣ ಶಬರಾಯ, ಸಂಪೂರ್ಣ ರಾಮಾಯಣ ಯಕ್ಷಗಾನ ನಿರ್ದೇಶಕ.

ಪೀಠಿಕೆಯಲ್ಲಿ ವಿಷ್ಣು ಹಾಗೂ ಈಗ ರಾಮನಾಗಿ ಅಭಿನಯ ಸಂತೋಷಕೊಟ್ಟಿದೆ. ಉತ್ತಮ ನಿರ್ದೇಶನ, ಕಥೆ ಪ್ರಸ್ತುತಿಯಿದೆ. ಯಕ್ಷರಂಗಕ್ಕೂ ಟಿವಿ ಸೀರಿಯಲ್ ಗಾಗಿ ಪ್ರದರ್ಶನಕ್ಕೂ ಅಜಗಜಾಂತರ. ಯಕ್ಷ ರಂಗದ ತಪ್ಪು ಮುಂದಿನ ಪ್ರದರ್ಶನಕ್ಕಷ್ಟೇ ಸರಿ ಮಾಡಿಕೊಳ್ಳಬಹುದು. ಇಲ್ಲಿ ತಪ್ಪು ಸರಿಯಾಗುವ ತನಕ ಬಿಡೋದಿಲ್ಲ. ವೇಷ ನಿರ್ಜೀವವಾಗೋದಿಲ್ಲ. - ಅಕ್ಷಯ್ ಮುಡುಬಿದಿರೆ, ಆ್ಯಕ್ಸಿಸ್ ಬ್ಯಾಂಕ್ ಉದ್ಯೋಗಿ (ರಾಮನ ಪಾತ್ರಧಾರಿ)



ಕೃಪೆ : http://www.vijaykarnataka.indiatimes.com ,

Share





ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
ಈ ಲೇಖನಕ್ಕೆ ಪ್ರತಿಕ್ರಿಯಿಸುವಲ್ಲಿ ನೀವು ಮೊದಲಿಗರಾಗಿ




ಪೂರಕ ಲೇಖನಗಳು
 



ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ